ಬಿಸಿಲಿನಲ್ಲಿ ಕಾಡುವ ಬೆವರು ಕಜ್ಜಿಗೆ ಮನೆಮದ್ದೇನು? ಇದನ್ನು ತಡೆಗಟ್ಟಲು ಏನು ಮಾಡಬೇಕು?

ಪ್ರತಿ ವರ್ಷದಂತೆ  ಈ ವರ್ಷನು ಕೂಡ ತುಂಬಾನೇ ಬಿಸಿಲು. ಬಿಸಿಲಿನಲ್ಲಿ ಒಂದು 5 ನಿಮಿಷ  ನಿಲ್ಲುವುದಕ್ಕೂ ಸಹ ಆಗೋದಿಲ್ಲಾ ಅಷ್ಟೊಂದು ಉರಿ ಬಿಸಿಲು. ಈ ಉರಿಬಿಸಿಲಿನಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದೆ. ಅದರಲ್ಲಿ ಬೆವರುಸಾಲೆ ಅಥವಾ ಬೆವರು ಕಜ್ಜಿ.

ಬಿಸಿಲಿಗೆ ಯಾವ ಬಟ್ಟೆ ಧರಿಸುತ್ತೇವೆ ಎಂಬುವುದು ಕೂಡ ಮುಖ್ಯ. ಫಂಕ್ಷನ್ಗಳಿಗೆ ಗ್ರ್ಯಾಂಡ್ ಲುಕ್ಗಾಗಿ ಗ್ರ್ಯಾಂಡ್ ವರ್ಕ್ನ ಬಟ್ಟೆ ಧರಿಸುತ್ತೇವೆ. ಇವೆಲ್ಲಾ ಮೈ ಉಷ್ಣಾಂಶ ಹೆಚ್ಚಿಸುತ್ತದೆ. ಮೈ ಬೆವರು ಕಜ್ಜಿ ಉಂಟಾಗುವುದು. ಈ ಬೆವರು ಕಜ್ಜಿ ಮಕ್ಕಳಿಗೂ ಬರುತ್ತದೆ, ಆದ್ದರಿಂದ ಅವರಿಗೆ ಸಡಿಲವಾದ ಕಾಟನ್ ಬಟ್ಟೆ ಧರಿಸಿ.

ಈ ಬೆವರು ಕಜ್ಜಿ ಬಂದರೆ ಏನು ಮಾಡಬೇಕು, ಯಾವ ಮನೆಮದ್ದು ಒಳ್ಳೆಯದು ಎಂದು ನೋಡೋಣ ಬನ್ನಿ:

ತಣ್ಣೀರಿನ ಸ್ನಾನ:
ಬೇಸಿಗೆಯಲ್ಲಿ ತಣ್ಣೀರ ಸ್ನಾನ ಒಳ್ಳೆಯದು, ತಣ್ಣೀರ ಸ್ನಾನ ಮಾಡುವುದರಿಂದ ಮೈ ಉಷ್ಣಾಂಶ ಕಡಿಮೆಯಾಗುವುದು. ಇನ್ನು ಸ್ನಾನ ಮಾಡಿದ ಮೇಲೆ ಮೈಯನ್ನು ಚೆನ್ನಾಗಿ ಒರೆಸಿ. ಡರ್ಮಿ ಕೂಲ್ನಂಥ ಪೌಡರ್ ಹಾಕಿ.

ಸಡಿಲವಾದ ಕಾಟನ್ ಬಟ್ಟೆ ಧರಿಸಿ:
ಈ ಸಮಯದಲ್ಲಿ ಬಿಗಿಯಾದ ಬಟ್ಟೆ ಧರಿಸಿ. ಹತ್ತಿಯ ಸಡಿಲವಾದ ಬಟ್ಟೆ ಧರಿಸಿ. ವರ್ಕೌಟ್ ಮಾಡುವಾಗ ಬಿಗಿ ಬಟ್ಟೆ ಧರಿಸಬಾರದು, ವರ್ಕೌಟ್ ಮಾಡುವಾಗ ಮೈ ಬೆವರುವುದು, ಇದರಿಂದ ತೊಡೆಗಳ ಬಳಿ, ಕಂಕುಳ ಬಳಿ ತುರಿಕೆ ಉಂಟಾಗುವುದು, ಬೆನ್ನಿನಲ್ಲಿ ಕೂಡ ಬೆವರು ಕಜ್ಜಿ ಬರುವುದು. ಇನ್ನು ತುಂಬಾ ತುರಿಕೆ ಇದ್ದರೆ ಐಸ್ಪ್ಯಾಕ್ ರಿಲೀಫ್ ನೀಡುತ್ತೆ.

ಇವುಗಳನ್ನು ಹಚ್ಚಿ ಸ್ನಾನ ಮಾಡಿ:
ನೀವು ಸ್ನಾನ ಮಾಡುವ ಮುನ್ನ ನೀರಿಗೆ ಸ್ವಲ್ಪ ಓಟ್ಸ್ ಹಾಕಿಡಿ, ನಂತರ ಆ ನೀರಿನಿಂದ ಸ್ನಾನ ಮಾಡಿ. ಓಟ್ಸ್ ಪೇಸ್ಟ್ ಮಾಡಿ ಮೈಗೆ ಹಚ್ಚಿ 5 ನಿಮಿಷ ಬಿಟ್ಟು ಮೈ ತೊಳೆದರೆ ಒಳ್ಳೆಯದು ತುರಿಕೆ ಕಡಿಮೆಯಾಗುವುದು. ಅಥವಾ ಬಕೆಟ್ ನೀರಿಗೆ 2-3 ಚಮಚ ಬೇಕಿಂಗ್ ಸೋಡಾ ಹಾಕಿ ಆ ನೀರಿನಲ್ಲಿ ಸ್ನಾನ ಮಾಡಿದರೆ ಕಜ್ಜಿ ತುರಿಸುವುದಿಲ್ಲ.

ಲೋಳೆಸರ:
ಲೋಳೆಸರ ಹಚ್ಚುವುದರಿಂದ ತುರಿಸುವುದಿಲ್ಲ, ಮೈ ತಣ್ಣಗೆ ಇರುತ್ತದೆ. ಸ್ನಾನಕ್ಕೆ ಸುಗಂಧ ಹೆಚ್ಚಿರುವ ಸೋಪು ಹಚ್ಚಬೇಡಿ, ಬದಲಿಗೆ ಸುವಾಸನೆ ಕಡಿಮೆ ಇರುವ ಸೋಪು ಬಳಸಿ, ಮೆಡಿಕಲ್ನಲ್ಲಿ ಕೇಳಿ ಬೆವರು ಕಜ್ಜಿಗೆ ಹಚ್ಚುವ ಸೋಪು ತಂದು ಅದನ್ನು ಬಳಸಿ.

ಬೆವರು ಕಜ್ಜಿಯಾದಾಗ ವೈದ್ಯರಿಗೆ ತೋರಿಸಬೇಕೆ?
ಸಾಮಾನ್ಯವಾಗಿ ಬೆವರು ಕಜ್ಜಿ 3-4 ದಿನಗಳಲ್ಲಿ ಕಡಿಮೆಯಾಗುತ್ತದೆ, 4 ದಿನ ಕಳೆದರೂ ಕಡಿಮೆಯಾಗಿಲ್ಲ, ಈ ಲಕ್ಷಣಗಳು ಕಂಡು ಬಂದರೆ ನೀವು ವೈದ್ಯರಿಗೆ ತೋರಿಸುವುದು ಒಳ್ಳೆಯದು. ಕೀವು ತುಂಬಿದರೆ 

ಜ್ವರ ಗಂಟಲು ನೋವು 

ಮೈಕೈ ನೋವು 

ಊತ ಕಂಡು ಬಂದರೆ 

ನೋವು ಅಧಿಕವಿದ್ದರೆ

ಈ ಕಜ್ಜಿ ಉಂಟಾಗದಂತೆ ತಡೆಗಟ್ಟುವುದು ಹೇಗೆ?
ತುಂಬಾ ಬಿಸಿಲಿನಲ್ಲಿ ಓಡಾಡಬೇಡಿ, ಓಡಾಡುವ ಅವಶ್ಯಕತೆ ಬಿದ್ದರೆ ಬಿಸಿಲಿನಲ್ಲಿ ಕೊಡೆ ಹಿಡಿದು ಓಡಾಡಿ.

 * ತುಂಬಾ ಮೈ ಬೆವರುವಾಗ ಫ್ಯಾನ್ ಅಥವಾ ಎಸಿ ಬಳಸಿ. 

* ತುಂಬಾ ಮೈ ಬೆವರಿದರೆ ತಣ್ಣೀರಿನ ಸ್ನಾನ ಮಾಡಿ, ಸಡಿಲವಾದ ಕಾಟನ್ ಬಟ್ಟೆ ಧರಿಸಿ. 

* ಈ ಸೆಕೆಯಲ್ಲಿ ಮನೆಯಲ್ಲಿ ಇರುವಾಗ ಮಕ್ಕಳಿಗೆ ಡಯಾಪರ್ ಬಳಸಬೇಡಿ. 

* ಮಲಗಿದ್ದಲ್ಲಿಯೇ ಇರುವ ರೋಗಿಯ ಆರೈಕೆ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಅವರು ಒಂದೇ ಕೆ ಮಲಗಿಸುವ ಬದಲಿಗೆ ಮೆಲ್ಲನೆ ಲಕೂರಿಸುವುದು ಅಥವಾ ಅವರನ್ನು ಬದಲಾಯಿಸಿ ಮಲಗಿಸುವುದು ಮಾಡಬೇಕು. ಕೋಣೆ ತಂಪಾಗಿರುವಂತೆ ನೋಡಿಕೊಳ್ಳಿ.